ಚಿತ್ರಭಾರತೀಯಲ್ಲಿ ಶ್ರೀಶಾರದಾ ಪೂಜೆ ಮತ್ತು ಶ್ರೀ ಗುರುಪೂಜೆ
ನಮ್ಮ ಆರಾಧ್ಯ ದೇವರಾದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಅನುಗ್ರಹದೊಂದಿಗೆ ಶ್ರೀಗುರು ಚಿತ್ರಭಾರತೀ ಕಬ್ಬಿನಗದ್ದೆಯಲ್ಲಿ ಶ್ರೀ ಶಾರದಾಪೂಜೆ ಮತ್ತು ಶ್ರೀ ಗುರುಪೂಜೆ ವಿಜಯದಶಮಿಯ ಪುಣ್ಯ ದಿನದಂದು ನೆರವೇರಿತು. ಶ್ರೀ ಗುರುಗಳ ೧೦ಲಕ್ಷ ಸುದ್ದಿಗಳು & ಚಿತ್ರಗಳನ್ನು ಹೊಂದಿರುವ ಅತೀ ದೊಡ್ಡ ಚಿತ್ರ ಭಂಡಾರ ಚಿತ್ರಭಾರತೀಯಲ್ಲಿ ಶ್ರೀ ಗುರುವಿನ ಚಿತ್ರಸಾನ್ನಿಧ್ಯವಿತ್ತು. ಪೂಜಾ ಸಮಯದಲ್ಲಿ ಶ್ರೀ ಗುರುವಿನ ಭಾವಚಿತ್ರದಿಂದ ಆಶೀರ್ವಾದವಾದದ್ದು ವಿಶೇಷವಾಗಿತ್ತು. ಚಿತ್ರಭಾರತೀಯ ಪ್ರಧಾನ ಸಂಗ್ರಾಹಕ & ಚಿತ್ರಭಾರತೀ ಬಳಗದವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.


No comments:
Post a Comment