Thursday, September 22, 2011
Wednesday, September 21, 2011
ಸಡಗರ ಸಂಭ್ರಮದ ಕಬ್ಬಿನಗದ್ದೆ ಗಣೇಶೋತ್ಸವ
65 ನೇ ವರ್ಷದ ಕಬ್ಬಿನಗದ್ದೆ ಗಣೇಶೋತ್ಸವ ವು ಸಡಗರ ಸಂಬ್ರಮದಿಂದ ಕಬ್ಬಿನಗದ್ದೆಯಲ್ಲಿ ದಿನಾಂಕ -01 -09 -2011 ರಿಂದ 05 -09 -2011 ವರೆಗೆ ವಿಜೃಂಭಣೆಯಿಂದ ನಡೆಯಿತು.ಈ ಬಾರಿ ಮಂಟಪ ವಿನ್ಯಾಸವು ರಥೋತ್ಸವದ ಸನ್ನಿವೇಶದಿಂದ ವಿಶೇಷವಾಗಿತ್ತು.ಕೆಂಪು ವರ್ಣದ ಗಣಪತಿ ಇಲ್ಲಿನ ವಿಶೇಷತೆಯಾಗಿದೆ.ಸುಂದರವಾದ ಮಂಗಳಮೂರ್ತಿಯ ನಿರ್ಮಾಣವನ್ನು ಕೆಕ್ಕಾರಿನ ಶ್ರೀ ಜಿ.ಡಿ.ಭಟ್ ರು ಬಹು ಸುಂದರವಾಗಿ ರಚಿಸಿದ್ದರು.ಮಂಟಪ ವಿನ್ಯಾಸವನ್ನು ಕಬ್ಬಿನಗದ್ದೆಯ ನಿಸರ್ಗ ಆರ್ಟ್ಸ್ & ಡೆಕೊರೆಶನ್ ನಿರ್ವಹಿಸಿದ್ದವು.ಥರ್ಮಕೂಲ್ ಬಳಸಿ ರಥದ ನಿರ್ಮಾಣವನ್ನು ಮಾಡಲಾಗಿತ್ತು .
ಮೂರನೆದಿನ ಗಣಹವನ ,ಸತ್ಯನಾರಾಯಣ ಕಥೆ,ವಿಶೇಷ ಪೂಜೆ,ನಾಲ್ಕನೆಯ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಪಂಡಿತ್ .ಜಿ.ಆರ್.ಭಟ್ ಬಾಳೆಗದ್ದೆ ಮತ್ತು ಸಂಗಡಿಗರಿಂದ ಸಂಗೀತ ಸಂಜೆ ಮತ್ತು ನಾಟ್ಯಶ್ರೀ ಯಕ್ಷಕಲಾ ಬಳಗ ಕವಲಕ್ಕಿ ಇವರಿಂದ ಶ್ರೀ ಕೃಷ್ಣ ಸಂಧಾನ ತಾಳಮದ್ದಲೆ.ರಸ ರಾಜ ಚಿಟ್ಟಾಣಿ ,ಹೊಸ್ತೋಟ ಮಂಜುನಾಥ ಭಾಗವತರು,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಜಿ.ವಿ,ಹೆಗ್ಡೆ,ಶ್ರೀಪಾದ ಹೆಗಡೆ ಹಡಿನಭಾಳ,ಭಾಗವತರಾಗಿ ಗೋಪಾಲ್ ಭಟ್ ಜೋಗಿಮನೆ ,ಮ್ರದಂಗ ವಾದಕರಾಗಿ ಗಣಪತಿ ಹೆಗಡೆ ಹಂದಿಮುಲ್ಲೆ ಪಾತ್ರವಹಿಸಿದ್ದರು.ಇಡಗುಂಜಿಯ ಧರ್ಮಾಧಿಕಾರಿ ಶ್ರೀ ಜಿ.ಜಿ.ಸಭಾಹಿತರು ಭೇಟಿ ನೀಡಿದ್ದರು. ಧ್ವನಿ ಮತ್ತು ಬೆಳಕು ನಿಸರ್ಗ ಡೆಕೊರೆಶನ್ ವಹಿಸಿದ್ದವು.
೫ನೇ ದಿನ ಹೂವಿನ ಮಂಟಪ ಸೇವೆ,ಸತ್ಯಗಣಪತಿ ವ್ರತ ನಡೆದವು.ಶ್ರೀ ಮಂಗಲ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ರಥವನೇರಿದ ಮಹಾಗಣಪತಿಗೆ ವಿಶೇಷ ಪೂಜೆಯೊಂದಿಗೆ ವೇದ ಗೋಷ,ಜಾಗಟೆ,ಇತರೆ ವಾದ್ಯಗಳೊಂದಿಗೆ ವಿದ್ಯುತ್ ದೀಪಾಲಂಕಾರದೊಂದಿಗೆ , ಮೆರವಣಿಗೆಯಲ್ಲಿ ಹೂ ಮಳೆ ಯಲ್ಲಿ ಮಂಗಲ ಮೂರ್ತಿಯ ವಿಸರ್ಜನೆಯನ್ನು ಮಾಡಲಾಯಿತು.ಈ ಸಂಧರ್ಭದಲ್ಲಿ ಕುಟುಂಬದವರು,ವಿಶೇಷ ಆಹ್ವಾನಿತರು,ಗಣ್ಯರು ಭಾಗವಹಿಸಿದ್ದರು.ಉತ್ಸವದಲ್ಲಿ ಜಾಗಟೆ ವಾದ್ಯ ಹೆಚ್ಚು ಮೆರಗನ್ನು ನೀಡಿದವು.ಉತ್ಸವದ ಸಂಪೂರ್ಣ ಚಿತ್ರೀಕರಣವನ್ನು ಓಂಕಾರ್ ಸ್ಟುಡಿಯೋ ಕವಲಕ್ಕಿ ,ಛಾಯಾಗ್ರಹಣವನ್ನು ವಿನಯ್ ಕುಮಾರ್ ಕಬ್ಬಿನಗದ್ದೆ ಮತ್ತು ರವಿಕಿರಣ್ ಕಬ್ಬಿನಗದ್ದೆ ನಿರ್ವಹಿಸಿದರು...ಸಾಂಸ್ಕ್ರತಿಕಕಾರ್ಯಕ್ರಮವನ್ನು ಎಸ್.ಜಿ.ಭಟ್ ಕಬ್ಬಿನಗದ್ದೆ ನಿರ್ವಹಿಸಿದ್ದರು.
v
Subscribe to:
Posts (Atom)